Like my Blog on FaceBook

Sunday, November 21, 2010

Bye Bye Great Souls

(ನನ್ನ ಪ್ರೀತಿಯ ಅಜ್ಜಿ )
ಕಳೆದ ವಾರ ನಾನು ನನ್ನ ಪ್ರೀತಿಯ ಅಜ್ಜಿಯನ್ನು ಕಳಕೊಂಡೆ.ಅವರ ಕೊನೆಯ ಗಳಿಗೆಯಲ್ಲಿ ನಾನು ಅವರ ಹತ್ತಿರ ಇರಬೇಕಾಗಿತ್ತು ಅಂತ ಅಂತ ತುಂಬಾ ಅನಿಸುತಿದೆ. Atleast ಇಲ್ಲಿ ಬರೋಕೆ ಮುಂಚೆ ಅವರ ಜೊತೆ ಸ್ವಲ್ಪ ಸಮಯ ಕಳದೆ ಅಂತ ಆದರು satisfaction ಇದೆ .
ನೆನ್ನೆ ತಾನೇ ನಮ್ ಜೊತೆ ಇದ್ದೋರು, ಇವತ್ತು ಇಲ್ಲ ಅಂದ್ರೆ ನಂಬೋಕೆ ಆಗ್ತಾ ಇಲ್ಲ.ಒಂದು ವಿಷಯ ನನ್ನನ ಕಾಡ್ತಾ ಇರೋದು ಅಂದ್ರೆ, ನಂಗೆ ತುಂಬಾ ಬೇಕಾದವರು ನನ್ನ ಅಗಲುವ ಮುಂಚೆ ನಾನು ಅವರನ್ನ ನೋಡಲಿಲ್ಲ, ಮಾತಡ್ಸ್ಲಿಲ್ಲ, ಅಂತ. ನನ್ನ ಇನ್ನೊಂದು ಅಜ್ಜಿ ಸತ್ಹಾಗಲು ಇದೆ ಥರ ಆಗಿತ್ತು.


ಚಿಕ್ಕ ವಯಸಿನಿಂದ್ಲು ನಾನು ಅವ್ರ ಜೊತೆಗೆ ಆತಡ್ಕೊಂಡು ಬೆಲ್ದೆ. ಮಗು ಆಗಿದಾಗ ನಾನು ಅವರ ಅಡುಗೆ ಮನೆಗೆ canteen ಅಂತ ಕರಿತಾ ಇದ್ದೆ. "ಅಜ್ಜಿ ನಿನ್  canteen ಆಯ್ತಾ??.ಮಲ್ಕೊಳೋಣ" ಅಂತ ಕೇಳ್ತಾ ಇದ್ದೆ. ಮಧ್ಯಾನ ಅವರ canteen ಮುಗಿದ ಮೇಲೆ ಒಂದು ಚಾಪೆ ಎಲೋಕೊಂದು ಬಂದು-"ಅಜ್ಜಿ ಬಾ ತಾಚೋಲನ" ಅಂತ ಇದ್ದೆ. ಇವ್ವತ್ತು ನಂಗೆ ಗ್ಯಪಕ ಇರೋದು ಅಂದ್ರೆ , ಅವರು ಅಡುಗೆ ಮಾಡ್ಬೇಕಾದ್ರೆ ಅಡುಗೆ ಕತ್ತೆ ಮೇಲೆ ಕೂತ್ಕೊಂಡು ಪುರಾಣ ಬಿಚ್ತ ಇದ್ದೆ. ಇನ್ನೊಂದು ವಿಷಯ ಚೆನ್ನಾಗಿ ಗ್ಯಪಕ ಇರೋದು ಅಂದ್ರೆ , ನಾನು ಯಾವಾಗ್ಲೂ ಪಕ್ಕದಲ್ಲಿ ಕೂತ್ಕೊಂಡು, ಅವರ  ಕ್ಯೆ ಬಲೆಗಳೊಂದಿಗೆ ಆತಾಡ್ತಿದ್ದೆ.ಅವರ soft soft  ಕ್ಯೆಗಳು ಇನ್ನ ಚೆನ್ನಾಗಿ ಗ್ಯಪಕ ಇದೆ." ಅಜ್ಜಿ .ಕಥೆ ಹೇಳು" ಅಂತ ಅವರ ಕ್ಯೆಗೆ ಸುಧಾ magazine ನ ತಂಕೊಡ್ತಾ ಇದ್ದೆ.

ಹಬ್ಬ ಹರಿದಿನ ಅಂದ್ರೆ ನಮ್ಮಜ್ಜಿ ನೆ chief cook. ಅವರ ಸಾರಥ್ಯದಲ್ಲಿ ಎಲ್ಲ ಸೊಸೆಯರು ಸೇರಿ ಅಡಿಗೆ ಮಾಡ್ತಾ ಇದ್ರೂ. ಅವರು ಮಾಡ್ತಾ ಇದ್ದ bisibele baath  ಇವಾಗ್ಲು ಬಾಯಲ್ಲಿ ನೀರು ತರುತ್ತೆ.ಹಾಲು ಬಾಯಿ , ಅವರು ಮಾಡುತಿದ್ದ ಮತ್ತೊಂದು special sweet.ಅವರಿಗೆ ಹೂವು ಮುದಿಯುವುದು ತುಂಬಾ ಇಷ್ಟ. ನಮ್ ತಾತ ಸತ್ತ ಮೇಲೆ , ಹೂವು ಮುದುಯುವ ಹಾಗಿಲ್ಲ ಅಂತ ತುಂಬಾ ಬೇಜಾರ್ ಮಾಡ್ಕೊಲೋರು.

ಕಳೆದ ವರ್ಷ ನಮ್ಮನ ಅಗಲಿದ ಮತೊಬ್ಬ ಅಜ್ಜಿಗೂ ನನ್ನ ಮನಸಿನಲ್ಲಿ ವಿಶೇಷ ಜಾಗವಿದೆ.ಪ್ರೆಥಿಯಿಂದ ಗುಡ್ಡದಹಳ್ಳಿ ಅಜ್ಜಿ , ಅಂತ ಕರಿತ ಇದ್ದೆ.ತುಂಬಾ ಶಾಂತ ಸ್ವಭಾವದ,ಅದಮ್ಬರವಿಲ್ಲದ ಹೆಂಗ್ಗಸು.ಆಗಿನ ಕಾಲದಲ್ಲಿ 10th standard  ಓದಿದ್ದ ನನ್ ಅಜ್ಜಿ, ನಾನು 4th standard ನಲ್ಲೂ ಸಹ ನನಗೆ maths ಹೇಳಿಕೊಡುವಷ್ಟು ಬುದ್ಧಿವಂತೆ.ಮಗುವಗಿದಾಗ -"ಅಜ್ಜಿ..ಅಜ್ಜಿ ಎತ್ಕೋ..ದೋಸೆ ತೋರ್ಸು" ಅಂತ ಹೇಳಿ ಅವರ ಕ್ಯಲ್ಲಿ ಎತ್ತಿಸಿ ಕೊಂದು ಅವರು ದೋಸೆ ಬಿಡೋದು ನೋಡ್ತಾ ಇದ್ದೆ.ಅವರು ಮಾಡಿದ ದೋಸೆ ನಂಗೆ ತುಂಬಾ ಇಷ್ಟ.ಅಡ್ಡಕ್ಕೆ, ನಾನ್ Engineering ಓದುವಾಗಲು ಸಂಜೆ ಬಿಸಿ ಬಿಸಿ ದೋಸೆ ಬಿಟ್ಟು ನಮ್ ತಾತನ ಕ್ಯಲ್ಲಿ ಕಲ್ಸ್ತ ಇದ್ರು.ಕೊನೆ ಗಾಲದಲ್ಲಿ Parkinsons ಇಂದ ಬಹಳ ನರಳಿದರು.
ಇನ್ನು ಮುಂದೆ ಅವರುಗಲ್ಲೆಲ್ಲರು ನನ್ನ ನೆನಪಲ್ಲಿ ಮಾತ್ರ ಉಳಿಯುವರು.ಒಂದು point  ನಂಗೆ ಅನ್ಸೋದು ಅಂದ್ರೆ , ಇವರು ಬದುಕಿದ್ದಾಗ ಇವರ ಜೊತೆ ಎರಡು ನಿಮಿಷ ಕೂತು ಮಾತು ಕೂಡ ಆಡಲಿಲ್ಲ ನಾವು. ಚಿಕ್ಕ ವಯಸಿನಲ್ಲಿ ಬೇಕಾದ ಸೇವೆಯಲ್ಲ ಮಾಡಿಸಿಕೊಂಡು , ಅವರ ಕೊನೆಗಾಲದಲ್ಲಿ ಅವರನ್ನ ಅಷ್ಟು neglect  ಮಾಡ್ತಿವಲ್ಲ ಅಂತ ಬೇಜಾರ್ ಆಗತ್ತೆ.ಪಾಪ ಪ್ರಜ್ಞೆ ಕಾಡುತ್ತೆ.

ಅದ್ದಕ್ಕೆ ಹೇಳ್ತೀನಿ, ನಿಮ್ ಅಜ್ಜಿ-ತಾತ ಯಾರಾದ್ರೂ ಇದ್ರೆ ಅವರ ಪಕ್ಕ ಕೂತು ಒಂದೆರಡು ಮಾತಾಡಿ.ನಿಮ್ಮನು ಎತ್ತಿ ಆಡಿಸಿದ ಆ ಹಿರಿಯ ಜೀವಗಳಿಗೆ ಪ್ರೀತಿ ಬೇಕೇ ಹೊರತು ದುಡ್ಡಲ್ಲ. ಅವರು ಇರುವ ವರೆಗಾದ್ರು ಚೆನ್ನಾಗಿ ನೋಡ್ಕೊಳ್ಳಿ, ಇಲ್ಲದಿದ್ರೆ ಆಮೇಲೆ ತಿಥಿ ಮಾಡಿದ್ರು ಅಲ್ಲ, ಅವರ ಹೆಸರಲ್ಲಿ trust ಓಪನ್ ಮಾಡಿದ್ರು , ಏನು ಉಪಯೋಗ ಎಲ್ಲ..

2 comments:

Manju said...

Nithin....Manasege..thumba novu aithu idanna...oodi...nimma ajjiaara athamkke shanthi sigalendu a devaru bali kelkothene..

Shreesha Gopalakrishna said...

great post Nithin....
ninna kone eradu vaakhyagalu thumba ne value kodo antaddu....eegina makkalige bari TV..computer huchchagide...respect kooda kadime ne...naavu ondu olle generation nalli iddvi annode khushi and mundina peelige bagge bhaya nu kooda...!

Want to do some Social service ?

Google Groups
Subscribe to Samaj Seva
Email:
Visit this group